ಚಿಕ್ಕಬಳ್ಳಾಪುರ, ಡಿಸೆಂಬರ್ 26: ಪ್ರಧಾನಿಯಾಗಿದ್ದ ವಾಜಪೇಯಿಯವರನ್ನು ಮುಂದಿನ ಕೇಂದ್ರ ಸರ್ಕಾರದ ಚುನಾವಣೆ ಸಮಯದಲ್ಲಿ ಹಲವರು ಅಟಲ್ಜಿ ನಿಮ್ಮನ್ನು ಈಗ ಮಾಜಿ ಎಂದು ಕರೆಯುವುದೇ ಅಥವಾ ಭಾವಿ ಪ್ರಧಾನಿ ಎಂದು ಕರೆಯುವುದೇ ಎಂದಾಗ ಅಟಲ್ಜೀ ಅವರು ಬಿಜೆಪಿಯ ಕಾರ್ಯಕರ್ತ ಎಂದು ಕರೆಯಿರಿ ಎಂದು ಎಂದು ಜಿಲ್ಲಾಧ್ಯಕ್ಷ ಸತ್ಯನಾರಾಯಣಮಹೇಶ್ ನುಡಿದರು.
ಅವರು ನಗರದ ಚೆನ್ನಕೇಶವ ಕಲ್ಯಾಣಮಂಟಪದಲ್ಲಿ ಚಿಕ್ಕಬಳ್ಳಾಪುರ ಗ್ರಾಮಾಂತರ ಮಂಡಲದ ನೂತನ ಅಧ್ಯಕ್ಷರ ಆಯ್ಕೆಯ ಸಭೆಯಲ್ಲಿ ಮಾತನಾಡುತ್ತಿದ್ದರು.
ಅಟಲ್ ಭಾವಚಿತ್ರ ನೀಡಿಕೆ : ಎಪಿಎಂಸಿ ಅಧ್ಯಕ್ಷರಾದ ಆರ್.ಚಂದ್ರಶೇಖರ್ ಅವರು ಪಕ್ಷದ ಸ್ಥಾನಿಕ ಸಮಿತಿಯ ಅಧ್ಯಕ್ಷರಿಗೆ ತಮ್ಮ ಕಛೇರಿಯಲ್ಲಿ ವಾಜಪೇಯಿ ಅವರ ಭಾವಚಿತ್ರ ಹಾಕಿಕೊಳ್ಳಲು ಅವರು ಖುದ್ದು ಎಲ್ಲಾ ಸ್ಥಾನಿಕ ಅಧ್ಯಕ್ಷರಿಗೂ ಭಾವಚಿತ್ರ ಕೊಡುಗೆಯನ್ನು ಚುನಾವಣಾಧಿಕಾರಿ ಪೂರ್ಣಿಮಾ ಪ್ರಕಾಶ್ ಮೂಲಕ ನೀಡಿದರು.